Friday, 14 October 2011

ಬಾಂಬ್ ಸ್ಪೋಟ

ಪ್ರತಿ ಸಾರಿ ಬಾಂಬ್ ಸ್ಪೋಟ ವಾದಾಗ  ಒಂದಷ್ಟು  ಜನ ಸಾಯುತ್ತಾರೆ. ಮತ್ತಷ್ಟು ಜನ ಗಾಯಾಳುಗಳಾಗುತ್ತಾರೆ.  ಸತ್ತವರಿಗೆ ಒಂದಷ್ಷ್ಟು ಹಣ, ಗಾಯಾಳುಗಳಿಗೆ ಮತ್ತ್ತಂದಷ್ಟು ಹಣ ಕೊಡುತ್ತದೆ. ನಮ್ಮ ಸರ್ಕಾರ, ಕಮಾಂಡೋಗಳ ಕಾರ್ಯಾಚರಣೆ, ಗೃಹ ಸಚಿವರ ಹೇಳಿಕೆಗಳು, ಯಾವುದೋ ಒಂದು ಮುಸ್ಲಿಂ ಸಂಘಟನೆ ಇದನ್ನು ಮಾಡಿದ್ದು ನಾವೇ..... ಅಂತ ಎದೆ ತಟ್ಟಿ ಹೇಳುತ್ತವೆ. ನಮ್ಮ ಸರ್ಕಾರ ಇದಕ್ಕೊಂದು ತನಿಖಾ ಸಮಿತಿ ರಚಿಸಿ, ಪತ್ರಿಕಾಗೋಷ್ಟಿ ಮಾಡಿ, ಸುಮ್ಮನಾಗುತ್ತಾರೆ. ಮತ್ತೆ  ಯಾವತ್ತೋ ಅದೇ ಬಾಂಬ್ ಸ್ಸ್ಪೋಟ, ಅದೇ ಮಾತುಗಳು, ಎದೆ ತಟ್ಟಿ ಹೇಳಿಕೊಳ್ಳುವ ಸಂಘಟನೆಗಳಿಗೆ ಯಾವತ್ತಾದರೂ ನಮ್ಮ ದೇಶದ ಕಾರ್ಯನಿರ್ವಾಹಕ ಪ್ರಭುಗಳು ಎದೆ ತಟ್ಟಿ ಹೇಳಿದ್ದಾರಾ? ಹುಷಾರ್ ಎಂದು...???? ಯಾವತ್ತಾರೂ ಕ್ರಮ ಗೊಳ್ಳಲು ಪ್ರಯತ್ನಿಸಿದೆಯಾ?   ಇದ್ಯಾವುದೂ ಇಲ್ಲ.
ಇವರ ಕಥೆ ಹಿಂಗಾದರೆ  ನಮ್ಮ ಪತ್ರಿಕಾ ಮಾಧ್ಯಮ  ಘಟನೆ ನಡೆದ ದಿನದಂದು ಹಬ್ಬವೋ ಹಬ್ಬ ಬೆಳಗಿನಿಂದ ಸಂಜೆಯವರೆವಿಗೂ ತೋರಿಸಿ ತೋರಿಸಿ, ಅವರೇ ಸುಸ್ತಾಗುತ್ತಾರೆ.

ಯಾವತ್ತು  ನನ್ನ ದೇಶ, ನನ್ನ ಭಾಷೆ, ನನ್ನ ರಾಜ್ಯ ಅನ್ನೋ ಭಾವನೆ ಬಂದುಬಿಟ್ಟರೆ ನಿಜಕ್ಕೂ ಭಾರತಮಾತೆ, ಕನ್ನಡಾಂಬೆ ಧನ್ಯನಾಗುತ್ತಾಳೆ. ಆದರೆ ಆಗುತ್ತಿರುವುದು ಏನು? ಮಾನವ ಸ್ವಾರ್ಥಕ್ಕೆ ಬಲಿಯಾಗುತ್ತಿದ್ದಾನೆ. ತನ್ನ ಮೌಲ್ಯಗಳನ್ನು ಬಲಿಕೊಡುತ್ತಿದ್ದಾನೆ. ಹೇಗಾದರೂ ಮಾಡಿ ಏನಾದರೂ ಮಾಡಿ ಹಣ ಗಳಿಸಬೇಕು, ತಾನು, ತನ್ನ ಸಂಸಾರ ಚೆನ್ನಾಗಿರಬೇಕು. ಬೇಕಾದಷ್ಟು ಇದ್ದರೂ ಇನ್ನಷ್ಟು ಹಣ ಮಾಡುವ  ಒಂದೇ ಒಂದು ದಾರಿಯಲ್ಲಿ ಸಾಗುತ್ತಿದೆ ಈ ಮಾನವ ಜಗತ್ತು. ಇಂತಹ ಸ್ವಾರ್ಥಗಳಿಂದ ಆಗುತ್ತಿರುವ ಆನಾಚಾರಗಳಲ್ಲಿ ಒಂದು ಬಾಂಬ್ ಸ್ಪೋಟ, ಸ್ಥಳೀಯರ ನೆರವು ಇಲ್ಲದೇ ಯಾವುದೂ ನಡೆಯುವುದಿಲ್ಲ.

ಎಲ್ಲಿಯವರೆವಿಗೂ ಭ್ರಷ್ಟ ಸರ್ಕಾರಿ ನೌಕರರು  ಜನರತೆರಿಗೆ ಹಣದಿಂದಲೇ ಸಂಬಳ ಭತ್ಯೆಗಳನ್ನು ಪಡೆದೂ ಸ ಹ ಜನರಿಂದ ಮತ್ತೆ ಭಿಕ್ಷೆ ಬೇಡಿ ಪಡೆಯುವುದನ್ನು ನಿಲ್ಲಿಸುತ್ತಾರೋ, ಭ್ರಷ್ಟಾಚಾರವನ್ನು ರಾಜಕಾರಣಿಗಳು ಮರೆತು ರಾಜ್ಯಕ್ಕಾಗಿ ನಿಸ್ವಾರ್ಥ ರಾಜಕೀಯ ಮಾಡುತ್ತಾರೋ, ತನ್ನ ಮೌಲ್ಯಗಳಿಗೆ ತಮ್ಮ ಘನತೆಗೆ ತಕ್ಕಂತೆ ಯಾವ ಪತ್ರಕರ್ತ ತನ್ನ ಕೆಲಸ ಮಾಡುತ್ತಾನೋ ಆಗ ನಮ್ಮ ದೇಶ, ನಮ್ಮ ರಾಜ್ಯ ನಮ್ಮಂತಹ ನಿಮ್ಮಂತಹ ಜನರ ಕನಸು ನನಸಾಗಬಹುದು. ಭ್ರಷ್ಟಾಚಾರದ ಬೇರುಗಳನ್ನು ಕಿತ್ತೊಗೆಯಬೇಕು. ಅದೊಂದರಿಂದ  ಇಡೀ ವ್ಯವಸ್ಥೆಯೇ ಅಧೋಗತಿಗೆ ತಲುಪುತ್ತಿದೆ. ಇಲ್ಲಿ ಯಾರನ್ನೂ ನಂಬುವಂತೆ ಇಲ್ಲ, ಸರಕಾರಿ ನೌಕರರು, ರಾಜಕಾರಣಿಗಳು ಇವರನ್ನು ಮೀರಿಸುವಂತಹ ನಮ್ಮ ಪತ್ರಕರ್ತರು ಇನ್ಯಾರನ್ನು ನಂಬಬೇಕು. ನಾವುಗಳೇ ಏನಾದರೂ ಮಾಡಬೇಕು.

ರಾಜು ವಿನಯ್ ದಾವಣಗೆರೆ

No comments:

Post a Comment